ಜಗದಿ ಕಾಲಂ:ಪೇಟೆ ಮುಖ ಹಳ್ಳಿಗೆ ಬಂತು
ಪೇಟೆ ಮುಖ ಹಳ್ಳಿಗೆ ಬಂದಿವೆ, ಹಳ್ಳಿ ಜೀವನ ಸಾಕೆಂದು ಪೇಟೆಯಲ್ಲಿ ಜೀವನ ಸಾಗಿಸಲು ಹೋದ ಮಂದಿ ತಿರುಗಿ ಹಳ್ಳಿ ಸೇರುವಂತೆ ಮಾಡಿದೆ ಈ ಕರೋನಾ. ವಿಶ್ವವನ್ನೇ ಕಾಡುತ್ತಿರುವ ಕರೋನಾ ನಮ್ಮ ದೇಶದಲ್ಲಿಯೂ ಇಗ್ಗಾ-ಮುಗ್ಗಾ ವಕ್ಕರಿಸಿಕೊಂಡಿದೆ. ಹಳ್ಳಿಯಲ್ಲಿ ವಯಸ್ಸಾದ ತಂದೆ-ತಾಯಿಯನ್ನ ಬಿಟ್ಟು ಸಿಟಿಯಲ್ಲಿ ಏನೋ ದಬ್ಬಾಕುತ್ತೀವಿ ಅಂತ ಬಂದ ಜನರು ಮಕ್ಕಡೆ ದಬ್ಬಾಕೊಂಡು ಬಿಟ್ಟಿದ್ದಾರೆ. ಹಳೆ ಹೆಂಡತಿ ಪಾದವೇ ಗತಿ ಅಂತ ಅಪ್ಪ-ಅಮ್ಮನ ಮುಖ ನೋಡಕ್ಕೆ ಅಥವಾ ತಮ್ಮ ಪರಣ ಉಳಿಸಿಕೊಳ್ಳಕೆ ಹಳ್ಳಿಗೆ ಮತ್ತೆ ಬಂದಿವೆ. ಹಳ್ಳಿಗೆ ಬಂದ ಪ್ಯಾಟೆ ಮುಖಗಳಿಗೆ ಮತ್ತೆ ಸಿಟಿಗೆ ಹೋದರೆ ಯಾರು ಉಪ್ಪಿಕಲ್ಲ ಅಂತ ಗೊತ್ತಾಗಿ ಅಪ್ಪನೋ,ತಾತನೋ ಉಳಿಸಿದ ಆಸ್ತಿ ಕಡೆ ಕಣ್ಣು ಬಿಟ್ಟಿದ್ದಾರೆ. ಮೆಳೆ ಬೆಳೆದುಕೊಂಡು ಕಗ್ಗಲ್ ಆಗಿದ್ದ ಭೂಮಿ ಜೆಸಿಬಿಯಿಂದ ಸಮತ್ತಟ್ಟಾಗವೆ. ಅಲ್ಲಲ್ಲಿ ಭೂಮಿಗೆ ತೂತು ಬಿದ್ದು ನೀರು ಮೇಲು ಬಂದು ಹಸಿರು ಕಂಡವೆ. ಹಬ್ಬಕ್ಕೂ ಊರಿಗೆ ಬರದೇ ಇದ್ದ ಪೇಟೆ ಮುಖಗಳು, ಕತ್ತು ಹಿಡಿದು ದಬ್ಬಿದರೂ ಹಳ್ಳಿ ಬಿಟ್ಟು ಹೋಗಲ್ಲ ಅಂತವೇ?!