ಮಂಜುಳಾ ಬರಿತಾರೆ... ಬುದ್ದನ ಹಾದಿಯಲ್ಲಿ

ನಗುವೇ ಕೊಲ್ಲುವ ಆಯುಧ


                                                                                             - ಮಂಜುಳ ಹುಲಿಕುಂಟೆ

ಬೋದಿ ವೃಕ್ಷದ ನೆರಳಿಲ್ಲ
ಸಿದ್ದ ಬುದ್ಧನ ನಗುವಿಲ್ಲ
ಮನದಲ್ಲೇ ತುಂಬಿದ್ದ ಆ ನಗು ಅದ್ಯಾಕೋ ಮರೆಯಾಗುತ್ತಿದೆ...


ಸಾವಿನ ದಲ್ಲಾಳಿಗಳ ಮದ್ಯೆ 
ನನ್ನ ನಗುವಿನ ಸಾವಾಗಿದೆ
ಸೂತಕದ ಮಡುವಿನಲ್ಲಿದೆ ಮನ
ಬಿಡುಗಡೆಯ ಬಾಗಿಲೂ ಮುಚ್ಚಿದೆ...
ಮತ್ತೆ ತುಂಬಿಕೊಳ್ಳಬೇಕಿದ ಅವನದೇ ನಗುವ
ಎದೆಯೊಳಗೆ......
ಎಲ್ಲಿ ನೋಡಿದರು ಕ್ರೂರಿಗಳ ದಂಡು
ನಿಷ್ಕಲ್ಮಷ ನಗುವಿನ ಸುಳಿವಿಲ್ಲ
ಸಾವವ್ಯಾಪಾರಿಗಳ ನಡುವೆ ನಿಂತಿರುವೆ
ಅಸಹಾಯಕಳಾಗಿ ....
ನನ್ನದೊಂದೆ ಆತಂಕವೀಗ
ನಾನೂ ಈ ವ್ಯಾಪಾರಕ್ಕಿಳಿದರೆ ...???


ಸಾಕಾಗಿದೆ ಕೊಂದು ಖುಷಿ ಪಡುವವರ ಸಂಗ
ಬಂದುಬಿಡಲೇ ನಿನ್ನ ದಾರಿ ಇಡಿದು....
ದಾರಿ ತೋರುವೆಯಾ ಗುರುವೇ...
ಆತ್ಮಸಾಕ್ಷಿ ಬೇಡುವ ಅಹಿಂಸೆಯ ಕಾಪಿಟ್ಟುಕೊಳ್ಳಬೇಕಿದೆ...
ಇಡೀ ಧರೆಯೇ ರಕ್ತ ಹೀರುವುದರಲ್ಲಿ ತಲ್ಲೀನ
ಸಾವು...ಯಕಶ್ಚಿತ್ ಇಲ್ಲಿ
ನಗುವೇ ಕೊಲ್ಲುವ ಆಯುಧ
ಪ್ರೀತಿ ವಂಚನೆಯ ಹಾದಿ ಹಿಡಿದಿದೆ...
ಇಲ್ಲಿ ಪ್ರೀತಿಯಿಂದ ಗೆಲ್ಲುವುದು ಏನೂ ಉಳಿದಿಲ್ಲ.

Comments

Popular posts from this blog

ಸುಳ್ಳು - ಸತ್ಯ