ಅಲೆಯಾದ ಕಣ್ಣೀರು

 ಅಲೆಯಾದ ಕಣ್ಣೀರು


ಹುಣ್ಣಮೆ ರಾತ್ರಿಯಲಿ
ಕುಳಿತಿದ್ದ ಸಮುದ್ರದಲ್ಲಿ
ಉಕ್ಕಿ ಉಕ್ಕಿ ಬರುತ್ತಿತ್ತು ಕಣ್ಣೀರು
ನನ್ನದೆಯಲ್ಲಿ ಅಲೆ ಅಲೆಯಾಗಿ

 



ಬರೆಯುತ್ತಿದ್ದ ಹಾಳೆಯದು 
ತೊಯ್ದು ಹೊಯ್ತು ಬಂಡೆಗೆ
ಬಡಿದ ಉಬ್ಬರದ ಅಬ್ಬರದ
ಕಣ್ಣೀರ ನೊರೆಯಿಂದ

ಅಲೆಯೊಂದು ಬಂದು
ಮೌನದ ಕಲ್ಲನ್ನು ಮಾತಾಡಿಸುವ
ನರ್ತನವು ಎಡೆಬಿಡದೆ
ನಿರಂತರವಾಗಿ ಹಾಡುತ್ತಿತ್ತು.

ಎದ್ದು ನಡಿದು ಹೋದೆ
ಹಸಿ ಹಸಿಯಾದ ಮರಳ ಮೇಲೆ
ಹಿಂದಿರುಗಿ ನೋಡಿದಾಗ
ಅಳಿದುಳಿದ ಹೆಜ್ಜೆ ಸಾಲು
                                                                                    ಮನ ಬಿಕ್ಕಿ ಬಿಕ್ಕಿ ಅಳುತಿತ್ತು.

Comments

Popular posts from this blog

ಸುಳ್ಳು - ಸತ್ಯ