ತ್ರೈಮಾಸದಿಂದ ನವಮಾಸದೆಡೆಗೆ
ತ್ರೈಮಾಸದಿಂದ ನವಮಾಸದೆಡೆಗೆ
-ಜಗದೀ
ನವಮಾಸವಿಲ್ಲದ ಬೆಡಗು ಮೂರು ತಿಂಗಳಲ್ಲಿ
ನವಮಾಸ ಮೌನವಿರುವ ಕೋಗಿಲೆ ತ್ರೈಮಾಸ ಹಾಡುವುದು
ಎಲ್ಲಿ ಹೋದೆ ನೀ ಕೋಗಿಲೆ
ನೀನು ಈಗ ನನ್ನ ಕೂಗಿ ಹಾಡದೆ
ಬೆಂಕಿಯೊಡಲಿನ ಬಂಡೆ ನನ್ನ ಎದೆ
ಮೂರು ತಿಂಗಳ ವಸಂತದಲಿ ನೀನಿದ್ದೆ
ನನೆದೆಯ ಹೃದಯ ವೀಣೆಯನು ನೀ ಮೀಟಿದ್ದೆ
ಅದರಿಂದ ಬಂದ ಸ್ವರವ ನನ್ನದೆಂದು ಕೊಂಡಿದ್ದೆ
ನವಮಾಸ ವಿರಸದಲಿ ನನ್ನಿಟ್ಟು ಎಲ್ಲಿರುವೆ
ಸ್ವರ ಬಂದ ವೀಣೆಗೆ ವಂದನೆಯೂ ಹೇಳದೆ
ಯಾವ ಬನದಲಿ ಯಾರ ಒಲವಿವಲ್ಲಿ ಮೈ ಮರೆತಿರುವೆ.
ಯಾವಾಗ ಬರುವುದು ನವ ವಸಂತ
''ಮೂರೆಂಬುದು ಬಾಳಿನಲಿ ಒಲವು ತುಂಬುವುದು
ಒಂಬತ್ತೆಂಬುದು ಬಾಳಿನಲಿ ನೋವು ನೀಡುವುದು
ಮೂರು ಮೂರೆಂಬುದು ಮೂರಕ್ಕೆ ಸೇರಿದಾಗ
ನೋವೆ ಬಾಳಿನಲಿ ಸುಖವು ಇನ್ನೆಲ್ಲಿ''
ನಿನ್ನ ಅರಸುತ್ತಿದೆ ನನ್ನದೆಯ ವೀಣೆ
ಬಂದೊಮ್ಮೆ ವೈಣಿಸೆ ಓ ಕೋಗಿಲೆ
.jpg)
.jpg)


.jpg)
Comments
Post a Comment
ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು