ಹೆಣ್ಣಿನ ಬಂಧನವ ಬಿಡಿಸಿರೋ ಬಿಡಿಸಿರಿ
ಭ್ರೂಣದಿಂದ ಸಮಾಧಿಯವರೆಗೆ
ಹತ್ಯೆಗೈದಿದ್ದು ಸಾಕಿನ್ನು
ನಿಮ್ಮೊಳಗಿನ ಹುಂಬುತನವನ್ನು
ಕೊಂದುಕೊಂಡು
ನಮ್ಮನು ಬದುಕಲು
ಬಿಡಿರೋ ಕ್ರೂರಿ ಗಂಡಸರೆ
ಬಿಡಿಸಿರೋ ಬಂಧನವ
ಬಿಡಿಸಿರೋ
ತಿಳಿಯಿರೋ ನಿಮ್ಮ
ಜೀವನ ಸಂಗಾತಿ
ಆಗಬೇಕಿರುವವಳು ಹೆಣ್ಣೆಂದು
ತಿಳಿಯಿರೋ
ಸಂಬಂಧಗಳೆನೆಂದು ಗೊತ್ತೇ ನಿನಗೆ
ಯಾಕೀ ಈ ಬಂಧನವು
ನನಗೆ
ಹೆಣ್ಣು ಮಕ್ಕಳನ್ನು ಕಾಮುಕ ಕಣ್ಣುಗಳಲ್ಲೇ
ನೋಡುತ್ತಿರಲ್ಲೋ
, ಅವಳ ಮರಣ ಶಾಸನವ
ಬರೆಯುತ್ತಿರಲ್ಲೋ,
ಆಲೋಚಿಸಿ ನೋಡಿರೋ
ಹೆಣ್ಣಿಲ್ಲದೆ ಬದುಕ
ಬಲ್ಲಿರೇನೋ, ನೀವು ಬದುಕಬಲ್ಲಿರೇನೋ
ಸ್ವಾತಂತ್ರಯ ಬೇಕಾಗಿದೆಯೋ ನಮಗೆ
ನಿಮ್ಮ ಬಂಧನದಿಂದ,
ರಕ್ತ ಪಾತದ
ಕ್ರಾಂತಿ ದೂರ ಇಲ್ಲವೋ
ತಿಳಿಯಿರೋ
ಗಂಡೆಂಬ ಗಂಡಸರೇ
ನಿಮ್ಮ ಗುಂಡಿಗೆಯ
ಸೀಳಲು ಬರುತಿಹುದು
ಸಿಂಹದ ಗರ್ಜನೆಯ ಹೆಣ್ಣು ಆರ್ಭಟ
ಗಂಡೆಂದು ಮೆರೆಯುವರಲ್ಲೋ
ನಿಮ್ಮ ಹುಚ್ಚುತನಕ್ಕೆ
ಏನೆಂದು ಕರೆಯಲಿ
ಕೆರೆಯೊಳಗಿನ ಕಲ್ಲಡಿಯ
ಏಡಿಗಳೇ
ನಿಮ್ಮ ಹೇಗೆ ಗಂಡೆನಲಿ
ಧರ್ಮದ ಹೆಸರಿನಲ್ಲಿ ಸಂಸ್ಕೃತಿಯ
ಉಸಿರಿನಲಿ ದೇವರಂತೆ
ಕಟ್ಟಿ
ಹಾಕಿರುವ ಕಟ್ಟಳೆಗಳ
ಬಿಚ್ಚಿರೋ
ಬಿಡಿಸಿರೋ ಬಂಡುಕೋರ
ಗಂಡಸರೇ
ಭ್ರೂಣದಿಂದ ಭೂಮಿಯೊಳಗಿನವರೆಗೆ
ಹತ್ಯೆಗೈದಿದ್ದು
ಸಾಕಿನ್ನು
ಬಿಡಿಸಿರೋ.....
ಕಟ್ಟದಿರೋ..... ಕಟ್ಟಳೆಯ
ಧರ್ಮದ ಕಟ್ಟಳೆಯ
ಸಂಸ್ಕೃತಿಯ
ಬತ್ತಳೆಯ.......
.jpg)





Comments
Post a Comment
ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು