ಒಲುಮೆ



ಒಲುಮೆ






ಮಿಂಚಿನ ಒಲುಮೆ ಬೇಸರ ನನಗೆ
ಗುಡುಗಿನ ದಡಬಡ ಎದರಿಕೆ ನನಗೆ
ಸಿಡಲಿನ ಶಕ್ತಿಯ ಎದುರಿಸಲಾಗದೆ
ಬೊರ್ಗರೆವ ಮಳೆಯಲ್ಲಿ ತೊಯ್ವುದು ಇಷ್ಟವಿಲ್ಲ ನನಗೆ

ಆದರೆ

 ಮುಂಜಾನೆಯ ಮಂಜಿನ ಒಲುಮೆ ಬೇಕು
ಅದು ಹಸಿರು ಎಲೆಗೆ ಮುತ್ತಿಟಂತಿರಬೇಕು
ಬೇಗೆ ಬಂದಾಗ ಹಾರಿ ಮರೆಯಾಗುವ ಅಂತರವಿರಬೇಕು
ಕತ್ತಲು ಮೂಡಿದಾಗ ನನ್ನೆದೆಯ ಸೇರಬೇಕು
ಅಂಥ ಶೀತಲ ಮಂಜು ಅಷ್ಟೇ ಸಾಕು
ಬೊರ್ಗೆರೆವ ಮಳೆ ಯಾಕೆ ಬೇಕು!











Comments

Popular posts from this blog

ಸುಳ್ಳು - ಸತ್ಯ